FacebookTwitter

ನೂರೇಳು ಮಹಡಿ ಮನೆಯ ಲಿಫ್ಟ್ ಕೈಕೊಟ್ಟರೆ ಹೇಗೆ?

    User Rating:  / 0
    PoorBest 

ದುಬೈ(ಜೂ.18): ಕಳೆದೊಂದು ವಾರದಿಂದ ದುಬೈನಲ್ಲಿ ಕೋಟ್ಯಧಿಪತಿಗಳ ನೂರಾರು 'ಮೆಟ್ಟಿಲು ಸೇವೆ' ನಡೆಯುತ್ತಿದೆ. ಹಾಗಂತ ಇವರೇನೂ ಯಾವುದೇ ದೇವರಿಗೆ ಹರಕೆ ಹೊತ್ತಿಲ್ಲ. ಕೋಟ್ಯಂತರ ರುಪಾಯಿ ಕೊಟ್ಟು ಖರೀದಿಸಿದ ಸ್ವಂತ ಮನೆ ತಲುಪಲು ಇವರು ಪಡುತ್ತಿರುವ ನಾಯಿಪಾಡು ಇದು.

ವಿಷಯ ಏನಪ್ಪಾ ಅಂದ್ರೆ ಈ ಕೋಟ್ಯಧಿಪತಿಗಳು ದುಬೈನಲ್ಲಿರುವ ವಿಶ್ವದಲ್ಲೇ ಅತಿ ಎತ್ತರದ(1,355 ಅಡಿ) ವಸತಿ ಸಂಕೀರ್ಣ ಪ್ರಿನ್ಸೆಸ್ ಟವರ್‌ನಲ್ಲಿ ಮನೆ ಖರೀದಿಸಿದ್ದಾರೆ. ಮೊನ್ನೆ ಮೊನ್ನೆ ವರೆಗೆ ಎಲ್ಲವೂ ಸರಿ ಇತ್ತು. ಕಳೆದೊಂದು ವಾರದಿಂದ ಇವರ ಪಾಡು ನಾಯಿಪಾಡಾಗಿದೆ. ಕಾರಣ ಇಷ್ಟೆ. ಈ ಕಟ್ಟಡದಲ್ಲಿರುವ ಎಂಟೂ ಮಾಳಿಗೆಗಳ ಲಿಫ್ಟ್ ಏಕಾಏಕಿ ಕೈಕೊಟ್ಟಿವೆ.

ಯಾರೂ ಮನೆಗೆ ಬರುತ್ತಿಲ್ಲವಂತೆ!
ಐದು- ಹತ್ತು ಮಹಡಿಯ ಕಟ್ಟಡವಾಗಿದ್ದರೆ ಚಿಂತೆ ಇರಲಿಲ್ಲ. ಆದರೆ ಇದು 107 ಮಹಡಿ ಕಟ್ಟಡ. ಕೊನೆಯ ಮಹಡಿಯಲ್ಲಿರುವ ಮನೆ ತಲುಪಲೂ ಈಗ ಮೆಟ್ಟಿಲೊಂದೇ ದಾರಿ. ಹಾಗಾಗಿ ಕೆಲವರಂತು ವಾರದಿಂದ ಮನೆಕಡೆ ತಲೆಹಾಕಿಯೇ ಇಲ್ಲವಂತೆ. ಹೊಟೇಲ್‌ಗಳಲ್ಲಿ ರೂಮ್ ಮಾಡಿ ಕೂತಿದ್ದಾರಂತೆ. ಹಾಗೋ ಹೀಗೋ ಮಾಡಿ ಕಟ್ಟಡದ ಮಾಲೀಕರು 50ನೇ ಮಾಳಿಗೆವರೆಗೆ ಸೀಮಿತ ಟ್ರಿಪ್‌ನ ಸರ್ವಿಸ್ ಎಲಿವೇಟರ್ ಸೌಲಭ್ಯ ಕಲ್ಪಿಸಿದ್ದಾರೆ. 50ರ ಮೇಲಿನ ಮಹಡಿಯವರಿಗೆ ಮೆಟ್ಟಿಲು ಹತ್ತುವ ಶಿಕ್ಷೆ ತಪ್ಪಿಲ್ಲ.

(ಕೃಪೆ: ಕನ್ನಡಪ್ರಭ)

 

 

 

Add comment




 

More items in this section