FacebookTwitter

ಆಪ್‌'ನ ಆಗಮನದಿಂದ ಬೆಚ್ಚಿಬಿದ್ದಿರುವ ಸಾಂಪ್ರದಾಯಿಕ ಪಕ್ಷಗಳು

11 ಜನವರಿ 2014 : ಆಮ್ ಆದ್ಮಿ ಆಗಮನ ಕರ್ನಾಟಕದ ಮೂರು ಸಾಂಪ್ರದಾಯಿಕ ಪಕ್ಷಗಳನ್ನು ನಡುಗಿಸುತ್ತಿರುವುದಂತೂ ಸುಳ್ಳಲ್ಲ. ಹೊಸ ಎದುರಾಳಿಯನ್ನು ಎದುರಿಸಲು ಸರ್ವರೀತಿಯ ಪ್ರಯತ್ನ ಮಾಡುತ್ತಿವೆ. ಪಕ್ಷದಿಂದ ಹೊರಹಾಕಲ್ಪಟ್ಟ ನಾಯಕರನ್ನೂ ಮತ್ತೆ ಕರೆತರುತ್ತಿವೆ. ಅವುಗಳ ಬಿಡಾರದಲ್ಲಿ ಏನಾಗುತ್ತಿದೆ ಎನ್ನುವುದನ್ನು ಒಮ್ಮೆ ಇಣುಕಿ ನೋಡೋಣ...

ಬೆಂಗಳೂರಿನ ಕಷ್ಟ ಪರಿಹರಿಸಲು ನಮಗೊಬ್ಬ ಕೇಜ್ರೀವಾಲ್ ಬೇಕು

04 ಜನವರಿ 2014 : ಪ್ರಬಲ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಸನ್ನು ಕಡೆಗಣಿಸಿ ದೆಹಲಿಗರು ಆಮ್ ಆದ್ಮಿ ಪಕ್ಷಕ್ಕೆ ಜೈಕಾರ ಹಾಕಿದರು. ಉತ್ತಮ ನಾಯಕತ್ವ ಮತ್ತು ಆಡಳಿತಕ್ಕೆ ಜನಾದೇಶದೊರಕಿತು. ಆಪ್ ಕೂಡ ತನ್ನನ್ನು ನಂಬಿದವರನ್ನು ಕಡೆಗಣಿಸಲಿಲ್ಲ. ಸಾಂಪ್ರದಾಯಿಕ ಪಕ್ಷಗಳಂತೆ ಅದರ ಭರವಸೆಗಳೂ ಕೇವಲ ಕಾಗದದ ಮೇಲೆ ಉಳಿಯಲಿಲ್ಲ.

ಹೆಸರಿಗಷ್ಟೇ ಅಧ್ಯಯನ ಪ್ರವಾಸ, ಮಾಡುವುದು ಬರೀ ಮಸ್ತಿ!

28 ಡಿಸೆಂಬರ್ 2013 : ತೆರಿಗೆದಾರರ ಹಣದಲ್ಲಿ ಮತ್ತೊಂದು ಮಸ್ತಿಯ ಪ್ರವಾಸ ನಡೆಸಲು ಕರ್ನಾಟಕದ ಶಾಸಕರು ಸಿದ್ಧರಾಗಿದ್ದಾರೆ. ಅಧ್ಯಯನದ ಹೆಸರಿನಲ್ಲಿ ಲ್ಯಾಟಿನ್ ಅಮೆರಿಕನ್ ಪ್ರವಾಸಕ್ಕೆ 30 ಮಂದಿ ಸಿದ್ಧತೆ ನಡೆಸಿದ್ದಾರೆ. ಅವರ ಮೊದಲ ಸ್ಟಾಪ್ ಅಮೆಜಾನ್ ಅರಣ್ಯಪ್ರದೇಶ. ಏತಕ್ಕೆ ಗೊತ್ತೇ? ಅಲ್ಲಿನ ಜಲಪಾತಗಳ ಬಗ್ಗೆ ಅಧ್ಯಯನ ನಡೆಸಿ ಅಲ್ಲಿ ಕಲಿತದ್ದನ್ನು ಕರ್ನಾಟದಲ್ಲಿ ಅನುಷ್ಠಾನಕ್ಕೆ ತರವುದಕ್ಕಂತೆ! ಇದಾದ ನಂತರ ಬ್ರೆಜಿಲ್ಗೆ ಭೇಟಿ ನೀಡಲಿರುವ ಈ ತಂಡ ಅಲ್ಲಿನ ಕ್ರೀಡಾ ಚಟುವಟಿಕೆಯ ಬಗ್ಗೆ ತಿಳಿದುಕೊಳ್ಳಲಿದೆ.

ಹಣದ ಕೊರತೆಯಲ್ಲ, ಕಳಪೆ ಆಡಳಿತ ಮತ್ತು ಭ್ರಷ್ಟಾಚಾರದ್ದೇ ತೊಂದರೆ

21 ಡಿಸೆಂಬರ್ 2013 : ನಗರವನ್ನು ಪ್ರತಿನಿಧಿಸುತ್ತಿರುವ 25 ಶಾಸಕರು ಹಾಗೂ 198 ಕಾರ್ಪೋರೇಟರ್‌'ಗಳು ಏನು ಮಾಡುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಅವರ್ಯಾರೂ ಮಾತಿಗೆ ಸಿಕ್ಕುವವರೇ ಅಲ್ಲ. ಇವರೆಲ್ಲ ಮತ ಕೇಳುವುದಕ್ಕೆ ಬಂದಾಗ, ತಾವು ನಗರವನ್ನು ಕಾಡುತ್ತಿರುವ ಎಲ್ಲ ಸಮಸ್ಯೆಗಳಿಗೂ ಮುಕ್ತಿ ತೋರಿಸುತ್ತೇವೆ ಎಂದೇ ಹೇಳಿರುತ್ತಾರಲ್ಲವೇ? ಆದರೆ ಅವರ್ಯಾರೂ ಈಗ ನಗರದ ಆರೋಗ್ಯದ ಬಗ್ಗೆ ಮಾತಾಡುತ್ತಿಲ್ಲ.

ನಮಗೂ ಬರುವುದೇ ದೆಹಲಿ ಮತದಾರರ ಗುಣ?

14 ಡಿಸೆಂಬರ್ 2013 : ಆಮ್ ಆದ್ಮಿ ಪಕ್ಷದ ಮುಂದಿನ ದಾರಿ ಅಷ್ಟೊಂದು ಸುಗಮವಾಗಿಲ್ಲ. ದೆಹಲಿ 'ಮಾದರಿ'ಯನ್ನು ಇಡೀ ದೇಶಕ್ಕೆ ಅನ್ವಯಿಸುವುದು ಸುಲಭವಲ್ಲ. ದೆಹಲಿಯಲ್ಲಿನ ಸಾಧನೆಯ ನಂತರ ಆಮ್ ಆದ್ಮಿ ಪಕ್ಷದ ಮೇಲಿನ ನಿರೀಕ್ಷೆಯಂತೂ ಹೆಚ್ಚಾಗಿದೆ.

ಆಮ್ ಆದ್ಮಿ ಪಕ್ಷವನ್ನು ಪ್ರಪಂಚವೇ ಗಮನಿಸುತ್ತಿದೆ!

30 ನವೆಂಬರ್ 2013 : ಭಾರತದ ರಾಜಕೀಯ ರಂಗದಲ್ಲಿ ಹೊಸ ರಂಗಿನೊಂದಿಗೆ ಮಿಂಚುತ್ತಿರುವ ಆಮ್ ಆದ್ಮಿ ಪಕ್ಷದತ್ತ ಈಗ ಎಲ್ಲರ ಚಿತ್ತ ನೆಟ್ಟಿದೆ. ಆ ಪಕ್ಷ ತಮಗೆ ಯಾವ ಹಾನಿಯನ್ನೂ ಮಾಡದು ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಸಾರ್ವಜನಿಕವಾಗಿ ಹೇಳುತ್ತಿದ್ದಾವಾದರೂ, ಒಳಗೊಳಗೇ ಅವು ಹೆದರುತ್ತಿವೆ...

ಅಪರಾಧ ನಗರಿ ಬೆಂಗಳೂರನ್ನು ಅಪಾಯದಿಂದ ರಕ್ಷಿಸುವವರ್ಯಾರು?

23 ನವೆಂಬರ್ 2013 : ಅರೆಮಂಪರಿನ ನಗರಿಯಿಂದ ಅವ್ಯವಸ್ಥಿತವಾಗಿ ಬೆಳೆಯುತ್ತಿರುವ ಮಹಾನಗರವಾಗಿ, ಗಾರ್ಡನ್ ಸಿಟಿಯಿಂದ ಗಾರ್ಬೇಜ್ ಸಿಟಿಯಾಗಿ, ಐಟಿ ನಗರಿಯಿಂದ ತಗ್ಗು ಗುಂಡಿಗಳ ನಗರವಾಗಿ, ಭಾರತದಲ್ಲಿ ಮೊದಲ ಬಾರಿ ವಿದ್ಯುತ್ ಪಡೆದ ನಗರಿಯಿಂದ ನಿರಂತರವಾಗಿ ವಿದ್ಯುತ್ ಕೈ ಕೊಡುವ ನಗರವಾಗಿ, ಶಾಂತ ನಗರಿಯಿಂದ ಅಶಾಂತ ನಗರವಾಗಿ ಬೆಂಗಳೂರು ಬದಲಾಗಿದೆ. ಈ ಬದಲಾವಣೆಯಿಂದ ಬೆಂಗಳೂರಿನ ವರ್ಚಸ್ಸಿಗೆ ಭಾರೀ ಹೊಡೆತ ಬಿದ್ದಿದೆ.

ಹಿಂದಿ ಚಲನಚಿತ್ರದ ಡೈಲಾಗ್ ನೆನಪಿಸುತ್ತಿರುವ ಬಿಬಿಎಂಪಿ

16 ನವೆಂಬರ್ 2013 : ಬೆಂಗಳೂರಿನ ರಸ್ತೆಯಲ್ಲಿ ಬಾಯಿ ತೆರೆದುಕೊಂಡಿರುವ ಗುಂಡಿಗಳನ್ನು ಮುಚ್ಚುವುದಕ್ಕೆ ಅಧಿಕಾರದಲ್ಲಿರುವವರು ಒಂದು ತಾರೀಖಿನಿಂದ ಇನ್ನೊಂದು ತಾರೀಖಿಗೆ ಗಡುವು ವಿಸ್ತರಿಸುತ್ತಿರುವುದನ್ನು ನೋಡಿ ಬೆಂಗಳೂರಿಗರು ವ್ಯಗ್ರವಾಗಿದ್ದಾರೆ. ಈ ಗುಂಡಿಗಳ ರಸ್ತೆಯಲ್ಲಿ ಗಾಡಿ ಓಡಿಸಲು ಗುಂಡಿಯಂತೂ ಬೇಕು. ಏಕೆಂದರೆ ಅದಾಗಲೇ ಬಹಳಷ್ಟು ಜನರು ಇಂಥ ರಸ್ತೆಗಳಲ್ಲಿ ಸಂಚರಿಸುವಾಗ ಬಿದ್ದು ಗಾಯಗೊಂಡ ಅನೇಕ ಉದಾಹರಣೆಗಳಿವೆ. ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಈ ರಸ್ತೆಗಳಲ್ಲಿ ಓಡಾಡುವ ಪ್ರತಿಯೊಂದು ವಾಹನವೂ ಮೆಕ್ಯಾನಿಕ್ ಅಂಗಡಿಗೆ ಒಂದಲ್ಲ ಒಂದು ಬಾರಿ ಅಡ್ಮಿಟ್ ಆಗಿಯೇ ಬಂದಿರುತ್ತದೆ.

ಕೊರೆಯುತ್ತಿರುವ ಪ್ರಶ್ನೆಗಳಿಗೆ ಸದ್ಯದಲ್ಲೇ ದೊರೆಯಲಿದೆ ಉತ್ತರ!

09 ನವೆಂಬರ್ 2013 : ನರೇಂದ್ರ ಮೋದಿ ಆಡುವ ಪ್ರತೀ ಮಾತಿಗೂ ತಿರುಗೇಟು ನೀಡಲು/ ತಿರುಚಲು ರಾಜಕೀಯ ವಿರೋಧಿಗಳು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ತಾವು ಹೀಗೆ ಮಾಡಿದಾಗೆಲ್ಲ ಮೋದಿ ಇನ್ನಷ್ಟು ಗಟ್ಟಿಯಾಗುತ್ತಾ ಹೋಗುತ್ತಿದ್ದಾರೆ ಎನ್ನುವುದು ಅವರಿಗೆ ಅರ್ಥವಾಗುತ್ತಿಲ್ಲ. ಅಷ್ಟೇ ಅಲ್ಲ, ಜನತೆಯ ದೃಷ್ಟಿಗೆ ಈ ರಾಜಕೀಯ ವಿರೋಧಿಗಳು, ಮೋದಿಯವರಿಂದ ತತ್ತರಿಸಿಹೋಗಿರುವ ಮತ್ತು ಹೆಚ್ಚುತ್ತಿರುವ ಅವರ ಜನಪ್ರಿಯತೆಯನ್ನು ಸಹಿಸಿಕೊಳ್ಳದೇ ಒದ್ದಾಡುತ್ತಿರುವವರ ಹಾಗೆ ಕಾಣಿಸುತ್ತಿದ್ದಾರೆ.

ರೋಮ್ ನಗರ ಹೊತ್ತಿ ಉರಿವಾಗ ನೀರೋ ಪಿಟೀಲು ಬಾರಿಸಿದನಂತೆ!

02 ನವೆಂಬರ್ 2013 : ನಮ್ಮ ರಾಜಕಾರಣಿಗಳ ನಡೆಯೇ ವಿಚಿತ್ರ. ಅವರ ಪಟ್ಟಿಯಲ್ಲಿ ಸಾಮಾನ್ಯ ಜನರಿಗೇನಿದ್ದರೂ ಕೊನೆಯ ಸ್ಥಾನ. ಸರ್ದಾರ್ ಪಟೇಲರ ವಿಷಯವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಗಲಾಟೆಯನ್ನೇ ಗಮನಿಸಿ. ಪಟೇಲರು ತಮಗೆ ಸಂಬಂಧಿಸಿದವರೆಂದು ಇಬ್ಬರೂ ಹೊಡೆದಾಡುತ್ತಿದ್ದಾರೆ. ನಿಜ ಹೇಳಬೇಕೆಂದರೆ, ಇವರೆಲ್ಲ ಪಟೇಲರ ಹೆಸರನ್ನು ದಾಳಿ ಮಾಡಲು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರಷ್ಟೆ.

ಸಂಸದೀಯ ಪ್ರಜಾಪ್ರಭುತ್ವಕ್ಕೆ ಸಿಕ್ಕ ಹೊಸ ತಿರುವು

26 ಅಕ್ಟೋಬರ್ 2013 : ಅಮೆರಿಕದಂತೆ ಭಾರತವೇನೂ ಅಧ್ಯಕ್ಷೀಯ ನಮೂನೆಯ ಪ್ರಜಾಪ್ರಭುತ್ವದ ಹಾದಿಯಲ್ಲಿ ಸಾಗುತ್ತಿಲ್ಲವಾದರೂ, ಪ್ರಧಾನಿ ಮತ್ತು ಮುಖ್ಯಮಂತ್ರಿ ಅಭ್ಯರ್ಥಿಗಳ ಹೆಸರನ್ನು ಮೊದಲೇ ಘೋಷಿಸುವ ಹೊಸ ಸಂಪ್ರದಾಯದ ಮೂಲಕ ಸಂಸದೀಯ ಪ್ರಜಾಪ್ರಭುತ್ವಕ್ಕೆ ಹೊಸ ತಿರುವು ಕೊಟ್ಟಿರುವುದಂತೂ ನಿಜ. ಜನತೆ ಈ ನಡೆಯನ್ನು ಸ್ವಾಗತಿಸುತ್ತಿದ್ದಾರೆ.

ನಗರದ ಮತದಾರರನ್ನು ಮೂರ್ಖರನ್ನಾಗಿಸುವುದು ಸುಲಭವಲ್ಲ!

19 ಅಕ್ಟೋಬರ್ 2013 : ಕೊನೆಗೂ ಗುಂಡಿಗಳಿಂದ ಆವೃತವಾಗಿರುವ ಬೆಂಗಳೂರಿನ ದುರಸ್ಥಿಗೆ 908 ಕೋಟಿ ರುಪಾಯಿಗಳ ಪ್ಯಾಕೇಜ್ ಸಿಕ್ಕಿದೆ! ಕಾಗದಗಳಲ್ಲಂತೂ ಈ ಯೋಜನೆ ಅದ್ಭುತವಾಗಿ ಕಾಣುತ್ತಿದೆ. ಬೆಂಗಳೂರಿನ ವೈಭವವನ್ನು ಮರುಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿರುವ ಆಶ್ವಾಸನೆಗಳೇನಿರಬಹುದೋ ಯೋಚಿಸಿ?

ನಾಯಕರಿಗೇಕೆ ನಾಗರಿಕ ಕೇಂದ್ರಿತ ಆಡಳಿತ ಬೇಕಿಲ್ಲ?

12 ಅಕ್ಟೋಬರ್ 2013 : ನಗರಾಡಳಿತ ಎನ್ನುವುದು ಭಾರತದಲ್ಲಿ ಮೊದಲಿನಿಂದಲೂ ದೊಡ್ಡ ಸಮಸ್ಯೆಗಳ ಆಗರ. ಅದಾಗ್ಯೂ ನಗರಗಳು ಆರ್ಥಿಕತೆಯ ಪ್ರಮುಖ ಯಂತ್ರಗಳಾಗಿ ಬೆಳೆದಿದ್ದರೂ, ಸರಿಯಾದ ಯೋಜನೆಗಳಿಲ್ಲದಿರುವುದು, ಅಧಿಕಾರದಲ್ಲಿರುವವರು ಉತ್ತರದಾಯಿತ್ವದಿಂದ ನುಣುಚಿಕೊಳ್ಳುವುದು ಮತ್ತು ಎಲ್ಲಾ ಹಂತಗಳಲ್ಲೂ ಹೆಚ್ಚುತ್ತಿರುವ ಭ್ರಷ್ಟಾಚಾರದಿಂದಾಗಿ ಅವುಗಳ ಅಭಿವೃದ್ಧಿಗೆ ಹೊಡೆತ ಬೀಳುತ್ತಲೇ ಇದೆ...

ನಿರ್ಲಜ್ಜ ಗುತ್ತಿಗೆದಾರರ ಜೊತೆ ಬಿಬಿಎಂಪಿಯ ಇಂಜಿನಿಯರುಗಳ ಅನೈತಿಕ ಸಂಬಂಧ

28 ಸೆಪ್ಟೆಂಬರ್ 2013 : ಐಟಿ ಸಿಟಿ ಬೆಂಗಳೂರಿನ ನಿರ್ವಾಹಕರ ಗುಣವೇ ವಿಚಿತ್ರವಾಗಿದೆ. ತೆರಿಗೆದಾರರು ರಸ್ತೆಯಲ್ಲಿನ ತಗ್ಗು ಗುಂಡಿಗಳ ಬಗ್ಗೆ ದೂರು ನೀಡಿದಾಗ, ಮಳೆಗಾಲ ಮುಗಿದ ಮೇಲೆ ರಸ್ತೆಗಳನ್ನು ಸರಿಪಡಿಸುತ್ತೇವೆ ಎಂದು ಅವರಿಗೆ ಹೇಳಿದರು. ಆದರೆ ಇತ್ತೀಚೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಬೆಂಗಳೂರಿಗೆ ಭೇಟಿ ನೀಡಿದಾಗ ಜನರಿಗೆ ಆಶ್ಚರ್ಯವೊಂದು ಕಾದಿತ್ತು. ತಟಕ್ಕನೆ ಎದ್ದು ಕುಳಿತ ಬಿಬಿಎಂಪಿ ರಸ್ತೆ ರಿಪೇರಿ ಮಾಡಿ ಮುಗಿಸಿತು...

ದೆಹಲಿಯಲ್ಲಿ ನಡೆಯುವುದೇ ಆಮ್ ಆದ್ಮಿ ಪಕ್ಷದ ಧಮಾಕಾ?

21 ಸೆಪ್ಟೆಂಬರ್ 2013 : ಆಧುನಿಕ ಮಹಾತ್ಮಾ ಗಾಂಧಿ ಎಂದು ಜನರಿಂದ ಕರೆಸಿಕೊಂಡ ಅಣ್ಣಾ ಹಜಾರೆ ನೆನಪಿದ್ದಾರೆಯೇ? ಕೆಲವು ವರ್ಷದ ಹಿಂದೆ ಅವರು ಭ್ರಷ್ಟಾಚಾರದ ವಿರುದ್ಧ ಕದನ ಘೋಷಿಸಿದಾಗ ಇಡೀ ರಾಷ್ಟ್ರವೇ ಅವರನ್ನು ಹಿಂಬಾಲಿಸಿತ್ತು. ಜನತೆಯಿಂದ ಅಣ್ಣಾ ಹಜಾರೆಯವರ ಚಳವಳಿಗೆ ದೊರೆತ ಬೆಂಬಲ ನೋಡಿ ರಾಜಕೀಯ ವರ್ಗದ ಬೆನ್ನ ಹುರಿಯಲ್ಲಿ ನಡುಕ ಹುಟ್ಟಿತ್ತು.

ಚಂದ್ರಯಾನ ಮಾಡಬೇಕೇ? ಹಾಗಿದ್ದರೆ ಒಮ್ಮೆ ಬೆಂಗಳೂರಿಗೆ ಬನ್ನಿ!

14 ಸೆಪ್ಟೆಂಬರ್ 2013 : ಯಾವುದೇ ಸರ್ಕಾರ ಬರಲಿ ಮತ್ತು ಯಾವುದೇ ಸರ್ಕಾರ ಹೋಗಲಿ, ಬೆಂಗಳೂರಿನ ರಸ್ತೆಗಳು ಮಾತ್ರ ಅದೇ ಕಳಪೆ ಸ್ಥಿತಿಯಲ್ಲಿಯೇ ಇರುತ್ತವೆ. ಇತ್ತೀಚಿನ ದಿನಗಳಲ್ಲಂತೂ ಬೆಂಗಳೂರಿನ ರಸ್ತೆಗಳು ಚಂದ್ರನ ಮೇಲ್ಮೈಯಂತೆ ಕಾಣುತ್ತಿವೆ. ಎಲ್ಲೆಲ್ಲೂ ಗುಂಡಿಗಳು.

ಮುಂಬರುವ ಅಡಚಣೆಯನ್ನು ಹೇಗೆ ದಾಟುವರು ಸಿದ್ದರಾಮಯ್ಯ?

07 ಸೆಪ್ಟಂಬರ್ 2013 : ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಒಂದು ಮಾತನ್ನಂತೂ ಹೇಳಬಹುದು- ಅವರು ತುಂಬಾ ಲಕ್ಕಿ. ಅವರ ಏರುದಾರಿಯಲ್ಲಿನ ಎಲ್ಲಾ ವಿಘ್ನಗಳೂ ತಮ್ಮಷ್ಟಕ್ಕೆ ತಾವೇ ಮಾಯವಾದವು. ಪಕ್ಷದ ಒಳಗಿನ ಮತ್ತು ಹೊರಗಿನ ಅವರ ವಿರೋಧಿಗಳೆಲ್ಲ ತಮ್ಮಷ್ಟಕ್ಕೆ ತಾವೇ ಹಿಂದೆ ಸರಿದರು.

ಜೆಡಿಎಸ್ ಮಾದರಿ ರಾಜಕೀಯವನ್ನು ಜನ ಕಣ್ಣೆತ್ತಿಯೂ ನೋಡುತ್ತಿಲ್ಲ

31 ಆಗಸ್ಟ್ 2013 : ಭಾರತೀಯ ಮತದಾರರು ಬುದ್ಧಿವಂತರಾಗುತ್ತಿದ್ದಾರೆ. ಜಾತಿ, ಸಮುದಾಯ, ಪ್ರದೇಶ, ಧರ್ಮ ಮುಂತಾದ ವಿಷಯಗಳು ಅವರ ಮನಸ್ಸನ್ನು ಆಕ್ರಮಿಸಿವೆಯಾದರೂ, ಕೆಲವೊಂದು ಸಂದರ್ಭಗಳಲ್ಲಿ ಆ ಎಲ್ಲಾ ಅಂಶಗಳನ್ನು ಬದಿಗೊತ್ತಿ, ತಮ್ಮ ನಿರೀಕ್ಷೆಗನುಗುಣವಾಗಿ ನಡೆದಕೊಳ್ಳದ ಪಕ್ಷಕ್ಕೆ ಅಥವಾ ಒಕ್ಕೂಟಕ್ಕೆ ಹೊರಬಾಗಿಲು ತೋರಿಸುತ್ತಿದ್ದಾರೆ.

ಅರ್ಥವಿಲ್ಲದ ಉಪಚುನಾವಣೆಗೆ ನಮ್ಮ ತೆರಿಗೆ ಹಣ ವ್ಯರ್ಥ

24 ಆಗಸ್ಟ್ 2013 : ಇದನ್ನು ಅಹಂಕಾರಗಳ ಕಾದಾಟವೆಂದಾದರೂ ಕರೆಯಿರಿ, ವ್ಯಕ್ತಿತ್ವಗಳ ಜಟಾಪಟಿ/ ಮಾಡು ಇಲ್ಲವೇ ಮಡಿ ಹೋರಾಟ/ ಶಕ್ತಿ ಪರೀಕ್ಷೆ. ಏನಾದರೂ ಹೆಸರಿಡಿ. ಆದರೆ ಅದಕ್ಕೆ ನೀಡಿದ ಪ್ರಾಮುಖ್ಯ ಮತ್ತು ಮಾಡಿದ ಖರ್ಚು ಅಗತ್ಯವಾಗಿತ್ತೇ?

ಅಧಿಕಾರದಾಸೆಯೇ ಮುಂದೆ ಭಿನ್ನಾಭಿಪ್ರಾಯಗಳೆಲ್ಲಾ ಹಿಂದೆ!

17 ಆಗಸ್ಟ್ 2013 : ಲೋಕಸಭಾ ಚುನಾವಣೆಗಳಿಗೆ ಇನ್ನು ಒಂದು ವರ್ಷ ಬಾಕಿ ಉಳಿದಿರುವ ವೇಳೆಯಲ್ಲೇ, ಕರ್ನಾಟಕದ ರಾಜಕೀಯ ಚಿತ್ರಣ ಮೆಲ್ಲಗೆ ಬದಲಾಗತೊಡಗಿದೆ. ಆಜನ್ಮ ಶತ್ರುಗಳು ಮಿತ್ರರಾಗುತ್ತಿದ್ದಾರೆ. ಅನುಕೂಲದ ಮದುವೆಗಳಿಗೆ ಸಿದ್ಧತೆ ನಡೆದಿದೆ. ಅವಕಾಶವಾದಿ ರಾಜಕಾರಣವಂತೂ ಅತ್ಯಂತ ಎತ್ತರದ ಮಟ್ಟದಲ್ಲಿ ಕುಣಿದಾಡುತ್ತಿದೆ.

ಜೆಡಿಎಸ್‌ನ ಶತ್ರು ಬಿಜೆಪಿಯೋ ಅಥವಾ ಕಾಂಗ್ರೆಸ್ಸೋ?

10 ಆಗಸ್ಟ್ 2013 : ಒಂದೊಮ್ಮೆ ಜನತಾ ದಳವನ್ನು ಕಾಂಗ್ರೆಸ್‌ಗೆ ಏಕೈಕ ಪರ್ಯಾಯವೆಂಬಂತೆ ನೋಡಲಾಗುತ್ತಿತ್ತು. ಅದಾಗ್ಯೂ ಇವೆರಡೂ ಪಕ್ಷಗಳ ನಡುವೆ ಯಾವುದೇ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಲಿಲ್ಲವಾದರೂ, ಜೆಡಿಎಸ್ ಕಾಂಗ್ರೆಸ್‌ಗೆ ಪ್ರತಿ ಚುನಾವಣೆಗಳಲ್ಲಿ ಪ್ರಬಲ ಸ್ಪರ್ಧೆಯನ್ನಂತೂ ಒಡ್ಡುತ್ತಿತ್ತು.