FacebookTwitter

ಕನ್ನಡದ ಹುಡುಗ ಸ್ಟುವರ್ಟ್ ಬಿನ್ನಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ

ಬೆಂಗಳೂರು(ಡಿ.31): ಜನವರಿ ಮೂರನೇ ವಾರದಿಂದ ನಡೆಯಲಿರುವ ನ್ಯೂಜಿಲೆಂಡ್ ಪ್ರವಾಸಕ್ಕೆ ಟೀಮ್ ಇಂಡಿಯಾವನ್ನ ಪ್ರಕಟಿಸಲಾಗಿದೆ. ಟೆಸ್ಟ್ ಸರಣಿ ಮತ್ತು ಏಕದಿನ ಕ್ರಿಕೆಟ್ ಸರಣಿಗಳಿಗೆ ತಂಡಗಳನ್ನ ಆಯ್ಕೆ ಮಾಡಲಾಗಿದೆ. ಕರ್ನಾಟಕದಿಂದ ಸ್ಟುವರ್ಟ್ ಬಿನ್ನಿ ಒಬ್ಬರೇ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದು. ಆಲ್ರೌಂಡರ್ ಸ್ಟುವರ್ಟ್ ಬಿನ್ನಿಯನ್ನ ಏಕದಿನ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಇನ್ನುಳಿದಂತೆ ಗಮನಾರ್ಹ ಬದಲಾವಣೆಯಂತೆ ತೋರಿದ್ದು ಈಶ್ವರ್ ಪಾಂಡೆ ಮತ್ತು ವರುಣ್ ಆರೋನ್ ಅವರ ಸೇರ್ಪಡೆಯ ವಿಷಯ..... ದೇಶೀಯ ಕ್ರಿಕೆಟ್'ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಈಶ್ವರ್ ಪಾಂಡೆ ಆಯ್ಕೆ ನಿರೀಕ್ಷಿತವೇ ಆಗಿದೆ. ಎತ್ತರ ಮೈಕಟ್ಟಿನ ಈಶ್ವರ್ ಪಾಂಡೆಯನ್ನ ಟೆಸ್ಟ್ ಮತ್ತು ಏಕದಿನ ಸರಣಿಗಳೆರಡಕ್ಕೂ ಸೇರಿಸಿಕೊಳ್ಳಲಾಗಿದೆ.

ಇನ್ನೊಬ್ಬ ವೇಗದ ಬೌಲರ್ ವರುಣ್ ಆರೋನ್ ಅವರನ್ನ ಏಕದಿನ ಕ್ರಿಕೆಟ್'ಗೆ ಮಾತ್ರ ಆಯ್ಕೆ ಮಾಡಲಾಗಿದೆ. ನ್ಯೂಜಿಲೆಂಡ್ ಪಿಚ್'ಗಳು ವೇಗದ ಬೌಲರ್'ಗಳಿಗೆ ಹೆಚ್ಚು ಅನುಕೂಲ ಮಾಡಿಕೊಡುವುದರಿಂದ ಆರು ಫಾಸ್ಟ್ ಬೌಲರ್'ಗಳನ್ನ ಒಳಗೊಳ್ಳಲಾಗಿದೆ.

ನಮ್ಮ ಸ್ಟುವರ್ಟ್ ಬಿನ್ನಿ ಒಳ್ಳೆಯ ಆಲ್ರೌಂಡರ್ ಆಗಿದ್ದು ಚುಟುಕು ಕ್ರಿಕೆಟ್'ನಲ್ಲಿ ತಂಡಕ್ಕೆ ಆಪತ್ಬಾಂಧವರಾಗಬಲ್ಲರಾಗಿದ್ದಾರೆ.

ವೀರೇಂದ್ರ ಸೆಹ್ವಾಗ್, ಗೌತಂ ಗಂಭೀರ್, ಯುವರಾಜ್ ಸಿಂಗ್ ಮೊದಲಾದ ಹಿರಿಯ ಕ್ರಿಕೆಟಿಗರು ಮತ್ತೆ ತಂಡದಲ್ಲಿ ಸೇರಲು ವಿಫಲರಾಗಿದ್ದಾರೆ....ಟೆಸ್ಟ್ ತಂಡ
ಎಂಎಸ್ ಧೋನಿ(ನಾಯಕ)
ಶಿಖರ್ ಧವನ್
ಮುರಳಿ ವಿಜಯ್
ಚೇತೇಶ್ವರ್ ಪೂಜಾರ
ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ
ಅಜಿಂಕ್ಯ ರಹಾನೆ
ಅಂಬಾಟಿ ರಾಯುಡು
ವೃದ್ಧಿಮಾನ್ ಸಾಹಾ
ರವೀಂದ್ರ ಜಡೇಜಾ
ಆರ್.ಅಶ್ವಿನ್
ಜಹೀರ್ ಖಾನ್
ಮೊಹಮ್ಮದ್ ಶಮಿ
ಇಶಾಂತ್ ಶರ್ಮಾ
ಭುವನೇಶ್ವರ್ ಕುಮಾರ್
ಉಮೇಶ್ ಯಾದವ್
ಈಶ್ವರ್ ಪಾಂಡೆಏಕದಿನ ತಂಡ
ಎಂಎಸ್ ಧೋನಿ(ನಾಯಕ)
ಶಿಖರ್ ಧವನ್
ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ
ಅಜಿಂಕ್ಯ ರಹಾನೆ
ಸುರೇಶ್ ರೈನಾ
ಅಂಬಾಟಿ ರಾಯುಡು
ರವೀಂದ್ರ ಜಡೇಜಾ
ಸ್ಟುವರ್ಟ್ ಬಿನ್ನಿ
ಭುವನೇಶ್ವರ್ ಕುಮಾರ್
ಮೊಹಮ್ಮದ್ ಶಮಿ
ಇಶಾಂತ್ ಶರ್ಮಾ
ಈಶ್ವರ್ ಪಾಂಡೆ
ವರುಣ್ ಆರೋನ್
ಆರ್.ಅಶ್ವಿನ್
ಅಮಿತ್ ಮಿಶ್ರಾ

 

 

 

Add comment
 

More items in this section