FacebookTwitter

ಕುತೂಹಲದ ಘಟ್ಟದಲ್ಲಿ ಕರ್ನಾಟಕ-ದೆಹಲಿ ರಣಜಿ ಪಂದ್ಯ

ದೆಹಲಿ(ಜ.01): ಕರ್ನಾಟಕ ಮತ್ತು ದೆಹಲಿಯ ಗ್ರೂಪ್ ಎ ಕೊನೆಯ ಪಂದ್ಯ ಕುತೂಹಲದ ಹಂತ ತಲುಪಿದೆ. ಕರ್ನಾಟಕದ ಮೊದಲ ಇನಿಂಗ್ಸನ್ನ ಬೇಗ ಮೊಟಕುಗೊಳಿಸಿದ ದೆಹಲಿ ತನ್ನ ಎರಡನೇ ಇನಿಂಗ್ಸಲ್ಲಿ 6 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿ ಒಟ್ಟಾರೆ 45 ರನ್ ಮುನ್ನಡೆ ಪಡೆದುಕೊಂಡಿದೆ. ಕರ್ನಾಟಕವೇ ಸುಸ್ಥಿತಿಯಲ್ಲಿದ್ದರೂ ನಾಳೆ ಕೊನೆಯ ದಿನದಂದು ದೆಹಲಿ ಏನಾದರೂ ಮ್ಯಾಜಿಕ್ ಮಾಡುವ ಆಶಯದಲ್ಲಿದೆ...

ಇಂದು ಐದು ವಿಕೆಟ್ ನಷ್ಟಕ್ಕೆ 226 ರನ್ನುಗಳೊಂದಿಗೆ 3ನೇ ದಿನದಾಟ ಆರಂಭಿಸಿದ ಕರ್ನಾಟಕದ ಇನಿಂಗ್ಸ್ 289 ರನ್ನುಗಳಿಗೆ ಮುಕ್ತಾಯಗೊಂಡಿತು. ಕರುಣ್ ನಾಯರ್ ಶತಕ ಗಳಿಸಿದ್ದಷ್ಟೇ ಕರ್ನಾಟಕದ ಪಾಲಿಗೆ ಸಮಾಧಾನ ತಂದಿದ್ದು... ಭಾರೀ ಮುನ್ನಡೆಯ ನಿರೀಕ್ಷೆಯಲ್ಲಿದ್ದ ಕರ್ನಾಟಕಕ್ಕೆ ಕೇವಲ 87 ರನ್ನುಗಳ ಮುನ್ನಡೆ ಪ್ರಾಪ್ತವಾಯಿತು.

ನಂತರ, ಮೊದಲ ಇನಿಂಗ್ಸ್'ನಂತೆ ತನ್ನ ಎರಡನೇ ಇನಿಂಗ್ಸ್'ನಲ್ಲೂ ದೆಹಲಿ ಎಡವಿತು. ದಿನದಾಟ ಮುಕ್ತಾಯವಾದಾಗ ದೆಹಲಿ 132 ರನ್ನುಗಳಿಗೆ 6 ವಿಕೆಟ್ ಕಳೆದುಕೊಂಡು ಸ್ವಲ್ಪ ಸಂಕಷ್ಟದ ಸ್ಥಿತಿ ತಲುಪಿತ್ತು. ಘಟಾನುಘಟಿ ಬ್ಯಾಟುಗಾರರಾದ ಗೌತಂ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ಮತ್ತೊಮ್ಮೆ ವಿಫಲರಾದರು...

ನಾಳೆ, ಗುರುವಾರ ಪಂದ್ಯದ ಕೊನೆಯ ದಿನವಾಗಿದೆ. ದೆಹಲಿಯ ಬಾಲಂಗೋಚಿ ಬ್ಯಾಟುಗಾರರನ್ನ ಬಹುಬೇಗನೇ ಪೆವಿಲಿಯನ್'ಗೆ ಅಟ್ಟಿದರೆ ಕರ್ನಾಟಕ ವಿಜಯದೊಂದಿಗೆ ಲೀಗ್ ವ್ಯವಹಾರವನ್ನ ಮುಕ್ತಾಯಗೊಳಿಸಲಿದೆ...ಸ್ಕೋರು ವಿವರ(3ನೇ ದಿನದಂತ್ಯಕ್ಕೆ):

ದೆಹಲಿ ಮೊದಲ ಇನಿಂಗ್ಸ್ 202 ರನ್

ಕರ್ನಾಟಕ ಮೊದಲ ಇನಿಂಗ್ಸ್ 289 ರನ್
(ಕರುಣ್ ನಾಯರ್ 105, ಸ್ಟುವರ್ಟ್ ಬಿನ್ನಿ 88, ಶ್ರೇಯಸ್ ಗೋಪಾಲ್ 28 ರನ್ - ಆಶೀಶ್ ನೆಹ್ರಾ 39/3, ವರುಣ್ ಸೂದ್ 93/3, ಮನೋಜ್ ಚೌಹಾಣ್ 47/2)

ದೆಹಲಿ ಎರಡನೇ ಇನಿಂಗ್ಸ್ 132/6
(ಮಿಥುನ್ ಮನ್ಹಾಸ್ 32, ರಜತ್ ಭಾಟಿಯಾ 30, ಗೌತಂ ಗಂಭೀರ್ 26 ರನ್ - ರೋಣಿತ್ ಮೋರೆ 27/3, ಎಚ್.ಎಸ್.ಶರತ್ 24/2)

 

 

 

Add comment
 

More items in this section