FacebookTwitter

ಉತ್ತಪ್ಪ, ನಾಯರ್ ಶತಕ; ಉಪ್ರ ವಿರುದ್ಧ ಫೀನಿಕ್ಸ್'ನಂತೆ ಮೇಲೆದ್ದ ಕರ್ನಾಟಕ

ಬೆಂಗಳೂರು(ಜ.08): ರಾಬಿನ್ ಉತ್ತಪ್ಪ ಮತ್ತು ಕರುಣ್ ನಾಯರ್ ಅವರ ಭರ್ಜರಿ ಶತಕದ ನೆರವಿನಿಂದ ಉತ್ತರಪ್ರದೇಶ ವಿರುದ್ಧದ ಕ್ವಾರ್ಟರ್'ಫೈನಲ್ ಪಂದ್ಯದಲ್ಲಿ ಕರ್ನಾಟಕ ಮೊದಲ ದಿನ ಉತ್ತಮ ಸ್ಥಿತಿಯಲ್ಲಿದೆ. ಒಂದು ಹಂತದಲ್ಲಿ ಶೋಚನೀಯ ಸ್ಥಿತಿಯಲ್ಲಿದ್ದ ಕರ್ನಾಟಕ ದಿನಾಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 297 ರನ್ ಗಳಿಸಿ ನಿಟ್ಟುಸಿರುಬಿಟ್ಟಿದೆ.

ಟಾಸ್ ಸೋತು ಮೊದಲು ಬ್ಯಾಟಿಗಿಳಿದ ಕರ್ನಾಟಕ 15 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತ್ತು. ಕೆ.ಎಲ್.ರಾಹುಲ್, ರವಿಕುಮಾರ್ ಸಮರ್ಥ್ ಮತ್ತು ಮನೀಶ್ ಪಾಂಡೆ ಒಂದೂ ರನ್ ಸೇರಿಸದೇ ಪೆವಿಲಿಯನ್'ಗೆ ಮರಳಿದ್ದರು. ಈ ಹಂತದಲ್ಲಿ ಕರ್ನಾಟಕ ನೂರು ರನ್ ಗಡಿ ಕೂಡ ದಾಟುವುದಿಲ್ಲವೆಂಬ ಸ್ಥಿತಿ ಇತ್ತು. ಆದರೆ, ರಾಬಿನ್ ಉತ್ತಪ್ಪ ಮತ್ತು ಕರುಣ್ ನಾಯರ್ ಇಬ್ಬರೂ 4ನೇ ವಿಕೆಟ್'ಗೆ 120 ರನ್ ಸೇರಿಸಿ ತಂಡವನ್ನ ಅಪಾಯದಿಂದ ಪಾರು ಮಾಡಿದ್ದರು. ಉತ್ತಪ್ಪ 160 ಎಸೆತಗಳಲ್ಲಿ 100 ರನ್ ಭಾರಿಸಿ ಮಿಂಚಿನ ಆಟವಾಡಿ ನಿರ್ಗಮಿಸಿದರು..

ರಾಬಿನ್ ಔಟಾದ ಬಳಿಕ ಕರುಣ್ ನಾಯರ್ ಮತ್ತು ಸಿಎಂ ಗೌತಂ ಅವರಿಂದ ಕರ್ನಾಟಕ ಇನಿಂಗ್ಸ್ ಇನ್ನಷ್ಟು ಬೆಳೆಯಿತು. ಇಬ್ಬರೂ 5ನೇ ವಿಕೆಟ್'ಗೆ 162 ರನ್ ಸೇರಿಸಿ ತಂಡದ ಸ್ಥಿತಿಯನ್ನ ಸುಭದ್ರಗೊಳಿಸಿದರು. ಕರುಣ್ ನಾಯರ್ ಸತತ ಎರಡನೇ ಶತಕ ದಾಖಲಿಸಿ ಔಟಾದರು. ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ಸಿಎಂ ಗೌತಂ ಅಜೇಯ 89 ರನ್ ಗಳಿಸಿ ಶತಕದ ಅಂಚಿನಲ್ಲಿದ್ದಾರೆ...

ಸ್ಕೋರು ವಿವರ(ಮೊದಲ ದಿನಾಂತ್ಯಕ್ಕೆ):
ಕರ್ನಾಟಕ ಮೊದಲ ಇನಿಂಗ್ಸ್ 297/5
(ರಾಬಿನ್ ಉತ್ತಪ್ಪ 100, ಕರುಣ್ ನಾಯರ್ 100, ಸಿ.ಎಂ.ಗೌತಮ್ ಅಜೇಯ 89 ರನ್ - ಅಮಿತ್ ಮಿಶ್ರಾ 70/2, ಆಲಿ ಮುರ್ತಾಜಾ 87/2)

 

 

 

Add comment
 

More items in this section