FacebookTwitter

ಕಳಪೆ ಫಾರ್ಮ್: ಐಪಿಎಲ್`ನ ಡೆಲ್ಲಿ ಡೇರ್`ಡೆವಿಲ್ಸ್ ತಂಡದಿಂದಲೂ ಸೆಹ್ವಾಗ್ ಔಟ್

ನವದೆಹಲಿ(ಜ.11): ಒಂದು ಕಾಲದ ಸಿಡಿಲಬ್ಬರದ ಹೊಡೆತಗಳ ಸರದಾರ ವೀರೇಂದ್ರ ಸೆಹ್ವಾಗ್. ಸೆಹ್ವಾಗ್ ಬ್ಯಾಟ್ ಹಿಡಿದು ಕ್ರೀಸ್`ಗೆ ಇಳಿದರೆ ರನ್ನಿನ ಹೊಳೆ ಹರಿಯುತ್ತಿತ್ತು. ಎದುರಾಳಿ ಬೌಲರ್`ಗಳ ತಂತ್ರಗಳೆಲ್ಲ ತಲೆಕೆಳಗಾಗುತ್ತಿದ್ದವು. ಇದ್ದಷ್ಟು ಹೊತ್ತು ಮೈದಾನದ ಮೂಲೆ ಮೂಲೆ ಚೆಂಡನ್ನ ಅಟ್ಟುತ್ತಾ ಬೌಲರ್`ಗಳ ನಿದ್ದೆಗೆಡಿಸುತ್ತಿದ್ದ ವೀರೇಂದ್ರ ಸೆಹ್ವಾಗ್ ಕ್ರಿಕೆಟ್ ಭವಿಷ್ಯ ಕವಲು ದಾರಿಯಲ್ಲಿದೆ.

ಕಳಪೆ ಫಾರ್ಮ್`ನಿಂದ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿದ್ದ ವೀರೇಂದ್ರ ಸೆಹ್ವಾಗ್ ದೇಶೀ ಕ್ರಿಕೆಟ್`ನಲ್ಲೂ ಕಮ್ ಬ್ಯಾಕ್ ಮಾಡುವಂತಹ ಆಟ ಆಡಲಿಲ್ಲ. ಪ್ರಥಮ ದರ್ಜೆ ಕ್ರಿಕೆಟ್`ನಲ್ಲೂ ಅವರ ಕಳಪೆ ಫಾರ್ಮ್ ಮುಂದುವರೆಯಿತು. ರಣಜಿಯಲ್ಲಿ ವಿದರ್ಭ ತಂಡದ ವಿರುದ್ಧ ಅರ್ಧಶತಕ ಗಳಿಸಿದ್ದು ಬಿಟ್ಟರೆ ಮತ್ಯಾವ ತಂಡದ ವಿರುದ್ಧವೂ ಸೆಹ್ವಾಗ್ ಹೇಳಿಕೊಳ್ಳುವಂತಹ ಆಟ ಪ್ರದರ್ಶಿಸಲಿಲ್ಲ. ಹೀಗಾಗಿ, ಐಪಿಎಲ್`ನಿಂದಲೂ ವೀರೇಂದ್ರ ಸೆಹ್ವಾಗ್ ಹೊರಬಿದ್ದಿದ್ದಾರೆ. ಡೆಲ್ಲಿ ಡೆವಿಲ್ಸ್ ತಂಡದಲ್ಲಿದ್ದ ಸೆಹ್ವಾಗ್`ರನ್ನ ಫ್ರಾಂಚೈಸಿ ಸೀಸನ್-7ಗೆ ಉಳಿಸಿಕೊಂಡಿಲ್ಲ. ಹೀಗಾಗಿ, ಸೆಹ್ವಾಗ್ ಫೆಬ್ರವರಿಯಲ್ಲಿ ನಡೆಯಲಿರುವ ಆಟಗಾರರ ಬಿಡ್ಡಿಂಗ್`ನಲ್ಲಿ ಪಾಲ್ಗೊಳ್ಳಬೇಕಿದೆ. ಕಳಪೆ ಫಾರ್ಮ್`ನಲ್ಲಿರುವ ವೀರೂವನ್ನ ಯಾವ ಫ್ರಾಂಚೈಸಿ ಖರೀದಿಸುತ್ತಾರೋ ಕಾದುನೋಡಬೇಕು.

ಒಂದೊಮ್ಮೆ ಡೆಲ್ಲಿ ತಂಡ ಸೆಹ್ವಾಗ್`ಗೆ ಅವಕಾಶ ಕೊಟ್ಟಿದ್ದರೆ ಹೊಸದಾಗಿ ನಿಯೋಜನೆಗೊಂಡಿರುವ ಹೆಡ್ ಕೋಚ್ ಗ್ಯಾರಿ ಕರ್ಸ್ಟನ್ ಸಲಹೆಯಿಂದ ಸೆಹ್ವಾಗ್ ಮತ್ತೆ ಫಾರ್ಮ್`ಗೆ ಮರಳುವ ಸಾಧ್ಯತೆ ಇತ್ತು. ಆದರೆ, ಆ ಅವಕಾಶವನ್ನ ಸೆಹ್ವಾಗ್ ಮಿಸ್ ಮಾಡಿಕೊಂಡಿದ್ದಾರೆ. 

 

 

 

Add comment




 

More items in this section