FacebookTwitter

ನನ್ನ ಮೇಲೂ ಸೆಕ್ಸ್ ಅಟ್ಯಾಕ್ ಆಗಿತ್ತು, ಧೈರ್ಯದಿಂದ ಹಿಮ್ಮೆಟ್ಟಿಸಿ ಬಚಾವ್ ಆಗಿದ್ದೆ - ಮೇರಿ ಕೋಮ್

ಕೋಲ್ಕತ್ತಾ(ಜ.17): ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಎಷ್ಟೇ ಸುರಕ್ಷಾ ಕ್ರಮಗಳನ್ನ ಕೈಗೊಂಡರೂ ಕಾಮುಕರ ಅಟ್ಟಹಾಸಕ್ಕೆ ಬ್ರೇಕ್ ಹಾಕೋಕೆ ಆಗುತ್ತಿಲ್ಲ. ಹೀಗಾಗಿ, ಮಹಿಳೆಯರೇ ತಮ್ಮನ್ನ ತಾವು ರಕ್ಷಿಸಿಕೊಳ್ಳಲು ಮುಂದಾಗಬೇಕಿದೆ ಎಂಬ ಸಲಹೆಗಳು ಕೇಳಿಬರುತ್ತಿದೆ. ದೆಹಲಿ ಗ್ಯಾಂಗ್ ರೇಪ್ ಬಳಿಕ ಹಲವೆಡೆ ಮಹಿಳೆಯರಿಗೆ ಸೆಲ್ಫ್ ಡಿಫೆನ್ಸ್ ಕಾರ್ಯಕ್ರಮಗಳೂ ಶುರುವಾಗಿವೆ. ಇದೀಗ, ಒಲಿಂಪಿಕ್ಸ್`ನ ಪದಕ ವಿಜೇತೆ ಬಾಕ್ಸರ್ ಮೇರಿಕೋಮ್, ಮಹಿಳೆಯರು ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳಲು ಸಬಲರಾಗಬೇಕೆಂದು ಸಲಹೆ ನೀಡಿದ್ದಾರೆ.

`ನನ್ನ ಮೇಲೂ ಸೆಕ್ಸ್ ಅಟ್ಯಾಕ್ ನಡೆದಿತ್ತು'.. ನಾನು, 18 ವರ್ಷದವಳಿರುವಾಗ ನನ್ನ ಮೇಲೂ ಸೆಕ್ಸ್ ಅಟ್ಯಾಕ್ ನಡೆದಿತ್ತು. ನಾನು ಧೈರ್ಯವಾಗಿ ಕಾಮುಕರನ್ನ ಹಿಮ್ಮೆಟ್ಟಿಸಿ ಮಾನ ಕಾಪಾಡಿಕೊಂಡೆ. ನೀವೂ ಸಹ ನನ್ನಂತೆ ಆತ್ಮರಕ್ಷಣೆ ಮಾಡಿಕೊಳ್ಳಿ, ಇದಕ್ಕಾಗಿ ದೈಹಿಕ ತರಬೇತಿ ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

`ನಾನು 18 ವರ್ಷದವಳಾಗಿದ್ದಾಗ ಒಂದು ಭಾನುವಾರ ನಾನು ಚರ್ಚ್`ಗೆ ತೆರಳುತ್ತಿದ್ದೆ. ಸಾಂಪ್ರದಾಯಿಕ ಉಡುಪನ್ನೇ ಧರಿಸಿದ್ದೆ. ಸ್ವಲ್ಪ ಸಮಯವಾಗಿದ್ದರಿಂದ ಆಟೋ ರೀಕ್ಷಾದಲ್ಲಿ ತೆಗೆದುಕೊಂಡು ಹೊರಟೆ. ಸ್ವಲ್ಪ ದೂರ ತೆರಳಿದ ಬಳಿಕ ರಿಕ್ಷಾ ಡ್ರೈವರ್ ನನ್ನ ಕೈಹಿಡಿದು ನನ್ನ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದ. ಆಟೋ ಡ್ರೈವರ್ ಮುಖಕ್ಕೆ ಗುದ್ದಿ, ನೆಲಕ್ಕೆ ಉರುಳಿಸಿ ನನ್ನ ಆತ್ಮರಕ್ಷಣೆ ಮಾಡಿಕೊಂಡೆ' ಎಂದು ಮಹಿಳಾ ಸಂಘಟನೆಯ ಕಾರ್ಯಕ್ರಮದಲ್ಲಿ ಮೇರಿ ಕೋಮ್ ಹೇಳಿದ್ದಾರೆ.

`ನಾನು ದೈಹಿಕವಾಗಿ ಸಮರ್ಥಳಾಗಿದ್ದರಿಂದ ನನ್ನ ಮೇಲೆ ಸೆಕ್ಸ್ ಅಟ್ಯಾಕ್ ಮಾಡಿದವನನ್ನ ನೆಕ್ಕುರುಳಿಸಿ ತಪ್ಪಿಸಿಕೊಂಡೆ. ಆ ಘಟನೆ ನನಗೊಂದು ಪಾಠ ಕಲಿಸಿತು. ನಾನೊಬ್ಬ ಮಹಿಳೆಯಾಗಿ ಯಾವಾಗಲೂ ನನ್ನ ಮೈಯೆಲ್ಲ ಕಣ್ಣಾಗಿರಬೇಕು. ಧೈರ್ಯವಾಗಿ ಸಂದರ್ಭಗಳನ್ನ ಎದುರಿಸಬೇಕೆಂದು ಅರಿತುಕೊಂಡೆ' ಎಂದು ಬಾಕ್ಸರ್ ಮೇರಿ ಕೋಮ್ ಹೇಳಿದ್ದಾರೆ.

`ಸೆಕ್ಸ್ ಅಟ್ಯಾಕ್`ಗಳನ್ನು ತಡೆಯಲು ದೈಹಿಕವಾಗಿ ತರಬೇತಿ ಪಡೆದುಕೊಳ್ಳುವಂತೆ ಎಲ್ಲ ಮಹಿಳೆಯರಿಗೆ ನಾನು ಮನವಿ ಮಾಡುತ್ತೇನೆ. ಯಾಕೆಂದರೆ, ದಾಳಿಕೋರರ ವಿರುದ್ಧ ಹೋರಾಡಬೇಕಾದರೆ ದೈಹಿಕ ಫಿಟ್`ನೆಸ್ ಅಗತ್ಯ. ಮಹಿಳೆಯರೆಲ್ಲರೂ ಭಯ ಬಿಟ್ಟು ಧೈರ್ಯದಿಂದ ಸೆಕ್ಸ್ ಅಟ್ಯಾಕ್`ಗಳನ್ನ ಎದುರಿಸಿ' ಎಂದು ಮೇರಿ ಕೋಮ್ ಮಹಿಳೆಯರಿಗೆ ಸಲಹೆ ನೀಡಿದ್ದಾರೆ.

 

 

 

Add comment




 

More items in this section