FacebookTwitter

ಹಾಕಿ: ಕೆನಡಾ ವಿರುದ್ಧ ಭಾರತಕ್ಕೆ ರೋಚಕ ಜಯ

ನವದೆಹಲಿ(ಡಿ.08): ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಟೀಮ್ ಇಂಡಿಯಾ ಚೊಚ್ಚಲ ಗೆಲುವಿನ ಖುಷಿ ಪಡೆದಿದೆ. ನಿನ್ನೆ ನಡೆದ ಗ್ರೂಪ್ ಸಿ ಪಂದ್ಯದಲ್ಲಿ ಕೆನಡಾ ವಿರುದ್ಧ ಭಾರತದ ಹುಡುಗರು 3-2 ಗೋಲುಗಳ ರೋಚಕ ಜಯ ಪಡೆದಿದ್ದಾರೆ.

ಜೂನಿಯರ್ ವಿಶ್ವಕಪ್ ಹಾಕಿ: ಭಾರತಕ್ಕೆ ನಿರಾಶೆಯ ಆರಂಭ

ನವದೆಹಲಿ(ಡಿ.07): ನಿನ್ನೆ ಆರಂಭಗೊಂಡ ಕಿರಿಯರ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಭಾರತ ಮೊದಲ ಪಂದ್ಯದಲ್ಲೇ ಎಡವಿ ಬಿದ್ದಿದೆ. ನಿನ್ನೆ ನಡೆದ ಗ್ರೂಪ್ ಸಿ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡ 3-2 ಗೋಲುಗಳಿಂದ ಭಾರತವನ್ನ ಸೋಲಿಸಿದೆ.

ಐ-ಲೀಗ್: ಹಾಲಿ ಚಾಂಪಿಯನ್ಸ್ ಚರ್ಚಿಲ್ ಬ್ರದರ್ಸ್ ವಿರುದ್ಧ ಬೆಂಗಳೂರು ಜಯಭೇರಿ

ಗೋವಾ(ಡಿ.07): ಬೆಂಗಳೂರು ಫುಟ್ಬಾಲ್ ಕ್ಲಬ್ ತನ್ನ ಗೆಲುವಿನ ಓಟ ಮುಂದುವರಿಸಿದೆ. ಹಾಲಿ ಚಾಂಪಿಯನ್ ಚರ್ಚಿಲ್ ಬ್ರದರ್ಸ್ ವಿರುದ್ಧ ಬೆಂಗಳೂರು ಹುಡುಗರು 3-1 ಗೋಲುಗಳಿಂದ ಭರ್ಜರಿ ಗೆಲುವು ಪಡೆದಿದ್ದಾರೆ.

ಫೀಫಾ ವಿಶ್ವಕಪ್ ಆತಿಥ್ಯ; ಭಾರತದಲ್ಲಿ ಮತ್ತೆ ಫುಟ್ಬಾಲ್ ಕ್ರಾಂತಿ?

ನವದೆಹಲಿ(ಡಿ.06): ಭಾರತದ ಹಲವು ದಿನಗಳ ಕನಸು ನನಸಾಗುವ ದಿನಗಳು ಸಮೀಪಿಸಿವೆ. 2017ರ ಅಂಡರ್-17 ಫೀಫಾ ವರ್ಲ್ಡ್ ಕಪ್ ಆತಿಥ್ಯವನ್ನ ಭಾರತಕ್ಕೆ ವಹಿಸಲು ಫೀಫಾ ಸಮ್ಮತಿಸಿದೆ...

ದ.ಆಫ್ರಿಕಾ ವಿರುದ್ಧ ಟೀಂ ಇಂಡಿಯಾಗೆ ಭಾರೀ ಮುಖಭಂಗ

ಜೊಹಾನ್ಸ್'ಬರ್ಗ್(ಡಿ.06): ಹರಿಣಗಳ ನಾಡಿನಲ್ಲಿ ಚೊಚ್ಚಲ ಸರಣಿ ಗೆಲುವಿಗಾಗಿ ಹಾತೊರೆಯುತ್ತಿರುವ ಭಾರತಕ್ಕೆ ಭಾರೀ ನಿರಾಶೆಯಾಗಿದೆ. ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 141 ರನ್ನುಗಳಿಂದ ಜಯ ದಾಖಲಿಸಿದೆ.

ಗಂಭೀರ್ ತಂಡದ ಮೂರನೇ ಓಪನರ್-ಅಚ್ಚರಿ ಹುಟ್ಟಿಸಿದ ನಾಯಕ ಧೋನಿ ಹೇಳಿಕೆ

ಮುಂಬೈ(ಡಿ.02): ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಭಾರತ ತಂಡದಲ್ಲಿ ಗೌತಮ್ ಗಂಭೀರ್ ಅವರನ್ನ ಆಯ್ಕೆ ಮಾಡದಿರುವುದು ನಾಯಕ ಧೋನಿಗೆ ಬೇಸರ ತಂದಿರುವಂತೆ ಕಾಣುತ್ತಿದೆ. ದಕ್ಷಿಣಾ ಆಫ್ರಿಕಾಗೆ ತೆರಳುವ ಮುನ್ನ ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಧೋನಿ ಕೊಟ್ಟ ಹೇಳಿಕೆ ಈ ಮಾತಿಗೆ ಪುಷ್ಠಿ ನೀಡುತ್ತಿದೆ. 

ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ 'ಒಡೆಯ'ರ್!

ಬೆಂಗಳೂರು: ನಿರೀಕ್ಷೆಯಂತೆ ಒಡೆಯರ್-ಬ್ರಿಜೇಶ್ ಬಣ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಡಳಿತ ಚುಕ್ಕಾಣಿ ಹಿಡಿದಿದೆ...

ರಣಜಿ: ಕರ್ನಾಟಕ ಬಚಾವ್; ಒಡಿಶಾ ವಿರುದ್ಧ ರೋಚಕ ಜಯ

ಕಟಕ್(ಡಿ.01): ರಣಜಿ ಟ್ರೋಫಿ ಗ್ರೂಪ್ ಎ ಪಂದ್ಯದಲ್ಲಿ ಒಡಿಶಾ ವಿರುದ್ಧ ಕರ್ನಾಟಕ 4 ವಿಕೆಟ್'ಗಳ ರೋಚಕ ಜಯ ಸಾಧಿಸಿದೆ...

ರಣಜಿ: ಪಾಂಡೆ ಶತಕ; ಕರ್ನಾಟಕಕ್ಕೆ ಇನಿಂಗ್ಸ್ ಮುನ್ನಡೆ

ಕಟಕ್(ನ.29): ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಒಡಿಶಾ ವಿರುದ್ಧ ಕರ್ನಾಟಕ ಮೊದಲ ಇನಿಂಗ್ಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಎರಡನೇ ದಿನದ ಅಂತ್ಯದ ವೇಳೆ ಕರ್ನಾಟಕ ತನ್ನ ಮೊದಲ ಇನಿಂಗ್ಸಲ್ಲಿ 4 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿದೆ.

ಯಶಸ್ಸಿಗೆ ಅಡ್ಡದಾರಿ ಇಲ್ಲ, ಕಷ್ಟ ಪಡಲೇಬೇಕು-ಮಗನಿಗೆ ಸಚಿನ್ ಕಿವಿಮಾತು

ಮುಂಬೈ(ನ.29): ನನ್ನ ಮಗ ಕ್ರಿಕೆಟ್ ಬಗ್ಗೆ ಹೆಚ್ಚು ಆಕರ್ಷಿತನಾಗಿದ್ದಾನೆ. ಆದರೆ, ಕಠಿಣ ಪರಿಶ್ರಮವಿಲ್ಲದೆ ಯಶಸ್ಸು ಅಸಾಧ್ಯ ಎಂದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಮಧುಮೇಹದ ವಿರುದ್ಧ ದೀರ್ಘ ಹೋರಾಟ-ವಾಸಿಂ ಅಕ್ರಮ್ ಗೆ ಪ್ರಶಸ್ತಿ

ಇಸ್ಲಾಮಾಬಾದ್(ನ.29): ವಾಸಿಂ ಅಕ್ರಮ್ ಪಾಕಿಸ್ತಾನದ ಖ್ಯಾತ ಮಾಜಿ ಕ್ರಿಕೆಟಿಗ. ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಬ್ಯಾಟ್ಸ್ ಮನ್ ಗಳನ್ನ ಕಟ್ಟಿಹಾಕುತ್ತಿದ್ದದ್ದು ಎಷ್ಟು ಸತ್ಯವೋ ತಮ್ಮ ದೇಹಕ್ಕೆ ಅಂಟಿರುವ ಮಾರಕ ಮಧುಮೇಹವನ್ನೂ ದೀರ್ಘಕಾಲದಿಂದ ಕಟ್ಟಿಹಾಕಿರುವುದು ಅಷ್ಟೇ ಸತ್ಯ.

 

More items in this section