FacebookTwitter

ಸೂಕ್ತ ಹಕ್ಕು ಕಲ್ಪಿಸಿದರೆ ಮಹಿಳೆಯರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಸಮರ್ಥರು:ರಾಹುಲ್ ಗಾಂಧಿ

    User Rating:  / 0
    PoorBest 
ಮಹಿಳಾ ಸಬಲೀಕರಣ, ರಾಹುಲ್ ಗಾಂಧಿ/ ಸಾಂದರ್ಭಿಕ ಚಿತ್ರ_ungu

ಭೋಪಾಲ್: ಕಿಡಿಗೇಡಿ ಪುರುಷ ಪ್ರಧಾನ ಸಮಾಜ ಹಾಗೂ ಕಿರಾತಕ ಆಚಾರ ವಿಚಾರಗಳಿಂದ ವ್ಯವಸ್ಥಿತವಾಗಿ ತುಳಿತಕ್ಕೊಳಗಾಗಿ ಇಂದಿಗೂ ಚೇತರಿಸಿಕೊಳ್ಳಲಾರದ ಸ್ಥಿತಿಗತಿಯಲ್ಲಿ ಜೀವನ ಸವೆಸುತ್ತಿರುವ ಅಸಹಾಯಕ ಜನಾಂಗ, ವರ್ಗಗಳ ಮಹಿಳೆಯರು ಹಾಜರಾಗಿದ್ದ ಸಭೆಯನ್ನುದ್ದೇಶಿಸಿ ಪ್ರಗತಿಪರ ಚಿಂತನೆ, ನೈಜ ದೇಶ ಪ್ರೇಮ, ಮಾನವೀಯ ಕಾಳಜಿಯನ್ನೊಳಗೊಂಡ ಮಹಿಳಾ ಸಬಲೀಕರಣದ ಮಾತನಾಡಿದ ಕಾಂಗ್ರೆಸ್ ಯುವ ನೇತಾರ ರಾಹುಲ್ ಗಾಂಧಿ, ವಿವಿಧ ವರ್ಗಗಳ ಮಹಿಳೆಯರಿಗೆ ಅವರದೇ ಸಮುದಾಯದ ಪರಿದಿಯಲ್ಲಿ ಹಕ್ಕು ಮೀಸಲಿಟ್ಟು ಪ್ರತಿನಿಧಿಸುವ ಅವಕಾಶ ಕಲ್ಪಿಸಿದರೆ ಸಾಕು ಅವರನ್ನು ಅವರೇ ರಕ್ಷಿಸಿಕೊಳ್ಳುತ್ತಾರೆ ಹೆಚ್ಚಿಗೇನೂ ಬೇಕಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿವಿಧ ಸಮುದಾಯಗಳಿಂದ ಹೀನಾಯವಾಗಿ ಬೇರ್ಪಟ್ಟು ತುಳಿತಕ್ಕೊಳಗಾಗಿರುವ ಮಹಿಳೆಯರ ಸಬಲೀಕರಣದ ಯೋಜನೆಯೂ ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವುದಾಗಿ ವಿಶ್ವಾಸ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ಪುರುಷರ ಹಾವಳಿಯಿಂದಾಗಿ ಹಿಂದುಳಿದಿರುವ ಮಹಿಳೆಯರನ್ನು ಉನ್ನತ ಸ್ಥರಕ್ಕೇರಿಸಲು ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ಒತ್ತಡ ಹೇರುವುದಾಗಿ ಕಾಳಜಿ ವ್ಯಕ್ತಪಡಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷದ ಪ್ರಚಾರ ಕಾರ್ಯದ ನೇತೃತ್ವ ವಹಿಸಲಿರುವ ರಾಹುಲ್ ಗಾಂಧಿ, ಈ ಸಂಬಂಧ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುವ ಕುರಿತು ವಿಶ್ವಾಸ ವ್ಯಕ್ತಪಡಿಸಿದರಲ್ಲದೆ, ಪುರುಷರಿಗಿರುವಷ್ಟೇ ಸಕಲ ಸಾಮರ್ಥ್ಯವೂ ಮಹಿಳೆಯರಿಗಿದ್ದು ಅವರಿಗೆ ಹಕ್ಕು ಸ್ವಾತಂತ್ರ್ಯ ಕಲ್ಪಿಸಬೇಕಷ್ಟೆ ಎಂದಿದ್ದಾರೆ.

ಮಹಿಳೆಯರ ನಾಯಕತ್ವದಲ್ಲಿ ಮನೆಯೂ ಯಶಸ್ವಿಯಾಗಿ ಮುನ್ನಡೆಯುತ್ತದೆ ಹಾಗೂ ಸಮಾಜವೂ ಮುನ್ನಡೆಯುತ್ತದೆ ಜತೆಗೆ ರಾಷ್ಟ್ರವೂ ಪ್ರಗತಿಪಥದತ್ತ ಸಾಗುತ್ತದೆ ಎಂದು ವಿವರಿಸಿ ಅಲ್ಲಿ ನೆರೆದಿದ್ದ ದುರ್ಬಲ ವರ್ಗಗಳ ಪ್ರತಿನಿಧಿ ಮಹಿಳೆಯರಲ್ಲಿ ಸ್ಪೂರ್ತಿ ನೀಡಿದ ರಾಹುಲ್, ತನ್ನ ಕೌಟುಂಬಿಕ ವಿಷಯವನ್ನು ಉದಾಹರಿಸಿ ಸ್ಪಷ್ಟವಾಗಿ ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದಾರೆ.

ನೀವು ನಂಬಲೇ ಬೇಕು..., ನಮ್ಮ ಮನೆಯಲ್ಲಿ ನಮ್ಮಪ್ಪ ರಾಜೀವ್ ಗಾಂಧಿಯಿದ್ದರು ಹಾಗೂ ದೊಡ್ಡಪ್ಪ ಸಂಜಯ್ ಗಾಂಧಿಯೂ ಇದ್ದರು. ಆದರೆ ನಮ್ಮ ಕುಟುಂಬದ ಬಾಸ್ ಆಗಿದ್ದವರು ನಮ್ಮಜ್ಜಿ ಇಂದಿರಾ ಗಾಂಧಿ. ಅವರ ಒಂದು ಮಾತಿನ ವಿರುದ್ಧ ಯಾರೂ ಚಕಾರವೆತ್ತುವಂತಿರಲಿಲ್ಲ. ಅವರ ನಿರ್ಧಾರ ಅಷ್ಟೊಂದು ಖಡಕ್ಕಾಗಿರುತ್ತಿತ್ತು ಎಂದು ವಿವರಿಸುವ ಮೂಲಕ ಮಹಿಳೆಯರಿಗೂ ಸಕಲ ಸಾಮರ್ಥ್ಯವಿದೆ ಎಂದು ಹುರಿದುಂಬಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರು, ಲೈಂಗಿಕ ಕಾರ್ಯಕರ್ತೆಯರು, ಸಮಾಜದಿಂದ ಕಡೆಗಣಿಸಲ್ಪಟ್ಟ ಸಮುದಾಯದ ಮಹಿಳೆಯರು, ಸಾಮಾಜಿಕ ಹೋರಾಟಗಾರ್ತಿ [ತಳಮಟ್ಟದ], ಮಂಗಳ ಮುಖಿಯರು, ಗುಲಾಬಿ ಗ್ಯಾಂಗ್ [ಮಧ್ಯಪ್ರದೇಶ-ಉತ್ತರ ಪ್ರದೇಶದ ಗಡಿಭಾಗ ಬುಂದೇಲ್’ಖಂಡದ ಜಾಗ್ರತಾ ಮಹಿಳಾ ಹೋರಾಟಗಾರರು] ಸೇರಿದಂತೆ ಹಲವಾರು ಬಡಪಾಯಿ ಮಹಿಳಾ ಸಂಘಟನೆಗಳ ಸುಮಾರು 250 ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಅವರು ಅನುಭವಿಸುತ್ತಿರುವ ಕಷ್ಟ, ನೋವು, ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ ಅವರಿಗೆ ತಿಳಿದಿರುವ ಮಾರ್ಗ [ಶಿಕ್ಷಣ, ಆರ್ಥಿಕ ಅಭಿವೃದ್ಧಿ, ರಾಜಕೀಯ ನಾಯಕತ್ವ, ಉದ್ಯೋಗ ಇತ್ಯಾದಿ] ಗಳ ಕುರಿತು ವಿಸ್ಕೃತವಾಗಿ ಚರ್ಚಿಸಿದರು.

ಮಹಿಳೆಯರ ಸಬಲೀಕರಣ, ಶ್ರೇಯೋಭಿವೃದ್ಧಿ ಕುರಿತು ಹೆಚ್ಚಿನ ಕಾಳಜಿ ವ್ಯಕ್ತಪಡಿಸಿ ಮಾತನಾಡಿದ ಅವರು ಈ ದೇಶದ ಶೇಕಡಾ ಐವತ್ತರಷ್ಟು ಜನಸಂಖ್ಯೆ ಸಬಲರಾಗದ ಹೊರತಾಗಿ ಭಾರತ ಸುಪರ್ ಪವರ್ ರಾಷ್ಟ್ರವಾಗಲು ಸಾಧ್ಯವಿಲ್ಲ ಎಂದರು.

ಕೇವಲ ಮಹಿಳಾ ಮೀಸಲಾತಿ ಮಸೂದೆಯನ್ನು ಅನುಷ್ಟಾನಕ್ಕೆ ತರುವುದು ಮಾತ್ರವೇ ಸಾಲದು, ಅದಕ್ಕಿಂತ ಮಿಗಿಲಾಗಿ ಮುಂದಿನ ಐದರಿಂದ ಹತ್ತು ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ನಾಯಕತ್ವದಲ್ಲಿ ಸರಿಸುಮಾರು ಅರ್ಧಕ್ಕರ್ಧ ಮಹಿಳಾ ಪ್ರತಿನಿಧಿಗಳೇ ಇರುವಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿ ನೀಡದ ಹೊರತಾಗಿ ಅವರು ಸಮರ್ಪಕವಾಗಿ ಸಬಲರಾಗಲು ಕಷ್ಟಸಾಧ್ಯ ಎಂದ ರಾಹುಲ್ ಗಾಂಧಿ, ಸಂಸತ್ತು, ವಿಧಾನಸಭೆಗಳಲ್ಲೂ ಮಹಿಳಾ ಪ್ರತಿನಿಧಿತ್ವ ಹೆಚ್ಚಿಸುವುದು ಪ್ರತೀ ರಾಜಕೀಯ ಪಕ್ಷಗಳ ಜವಾಬ್ದಾರಿ ಕೂಡ ಎಂದು ಅಭಿಪ್ರಾಯಪಟ್ಟಿದ್ದಾರೆ.

 

 

 

 

 

Add comment
Comments   

 
0 #1 Antoniogac 2019-05-23 20:13
Привет дамы и господа!: http://sfilm.by/
Предлагаем Вашему вниманию высококачествен ные профессиональны е плёнки.
Наша организация"ООО Защитные плёнки" работает 15 лет на рынке этой продукции в Беларуси.
Мы можем предложить Вам Защитные плёнки: http://sfilm.by ,архитектурные плёнки: http://sfilm.by,декоративные плёнки: http://sfilm.by,автомобильные плёнки: http://sfilm.by и противопожарные плёнки: http://sfilm.by.
Более подробная информация размещена на нашем сайте: http://sfilm.by
С уважением,колле ктив "ООО Защитные плёнки".
http://heelzy.com/author/patriotqcs/
http://power-kbr.ru/index/8-30162
http://forums.audioreview.com/member.php?u=408089
http://teleprogi.ru/index/8-141689
http://www.yourskool.com/el/author/patriotgpb/
Quote
 

 

More items in this section