FacebookTwitter

ನಿವೃತ್ತಿಗೂ ಮುನ್ನ ಟೀಮ್ ಇಂಡಿಯಾದಲ್ಲೊಂದು ಅವಕಾಶ ಸಿಕ್ಕರೆ ಸಾಕು - ಸೆಹ್ವಾಗ್

ಹರ್ಯಾಣ(ಜ.22): ಕಳಪೆ ಪ್ರದರ್ಶನದಿಂದ ಸಾಕಷ್ಟು ದಿನಗಳಿಂದ ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ವೀರೇಂದ್ರ ಸೆಹ್ವಾಗ್ ಟೀಮ್ ಇಂಡಿಯಾಗೆ ಕಮ್ ಬ್ಯಾಕ್ ಮಾಡಲು ಶತ ಪ್ರಯತ್ನ ನಡೆಸುತ್ತಿದ್ದಾರೆ. 

ಹಠ ಸಾಧಿಸಿದ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

ಕೊನೆಗೂ ಮಣಿದ ಕೇಂದ್ರ ಸರ್ಕಾರ, ವಿವಾದದಲ್ಲಿ ಗುರುತಿಸಿಕೊಂಡಿದ್ದ ಇಬ್ಬರು ಪೊಲೀಸ್ ಅಧಿಕಾರಿಯನ್ನು ರಜೆಯಲ್ಲಿ ಮನೆಗೆ ತೆರಳಲು ಸೂಚಿಸುವ ಮೂಲಕ ಪರೋಕ್ಷವಾಗಿ ಅಮಾನತು ಹೊರಡಿಸಿ ಅತ್ತ ಹಾವೂ ಸಾಯ್ಬಾರ್ದು ಇತ್ತ ಕೋಲೂ ಮುರಿಯಬಾರದೆಂಬ ನಾಜೂಕು ಕ್ರಮಕ್ಕೆ ಮುಂದಾಗಿ, ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರುವ ಗಣರಾಜ್ಯೋತ್ಸವಕ್ಕೆ ದಾರಿ ಸುಗಮಗೊಳಿಸಿದೆ.

ಸೂಕ್ತ ಹಕ್ಕು ಕಲ್ಪಿಸಿದರೆ ಮಹಿಳೆಯರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಸಮರ್ಥರು:ರಾಹುಲ್ ಗಾಂಧಿ

ಮಹಿಳಾ ಸಬಲೀಕರಣ, ರಾಹುಲ್ ಗಾಂಧಿ/ ಸಾಂದರ್ಭಿಕ ಚಿತ್ರ_ungu

ನೀವು ನಂಬಲೇ ಬೇಕು..., ನಮ್ಮ ಮನೆಯಲ್ಲಿ ನಮ್ಮಪ್ಪ ರಾಜೀವ್ ಗಾಂಧಿಯಿದ್ದರು ಹಾಗೂ ದೊಡ್ಡಪ್ಪ ಸಂಜಯ್ ಗಾಂಧಿಯೂ ಇದ್ದರು. ಆದರೆ ನಮ್ಮ ಕುಟುಂಬದ ಬಾಸ್ ಆಗಿದ್ದವರು ನಮ್ಮಜ್ಜಿ ಇಂದಿರಾ ಗಾಂಧಿ. ಅವರ ಒಂದು ಮಾತಿನ ವಿರುದ್ಧ ಯಾರೂ ಚಕಾರವೆತ್ತುವಂತಿರಲಿಲ್ಲ. ಅವರ ನಿರ್ಧಾರ ಅಷ್ಟೊಂದು ಖಡಕ್ಕಾಗಿರುತ್ತಿತ್ತು ಎಂದು ವಿವರಿಸುವ ಮೂಲಕ ಮಹಿಳೆಯರಿಗೂ ಸಕಲ ಸಾಮರ್ಥ್ಯವಿದೆ ಎಂದು ಹುರಿದುಂಬಿಸಿದ್ದಾರೆ.

ಕೇಜ್ರಿವಾಲ್ ಒತ್ತಡಕ್ಕೆಲ್ಲಾ ಕೇಂದ್ರ ಮಣಿಯಲ್ಲ; ಶಿಂದೆ

ಸುಶಿಲ್ ಕುಮಾರ್ ಶಿಂದೆ, ಅರವಿಂದ್ ಕೇಜ್ರಿವಾಲ್/ungu

ಪೊಲೀಸರು ಸಚಿವರ ಆದೇಶ ಪಾಲಿಸಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣಾ ವರದಿ ಬಂದ ಬಳಿಕ ಅದರ ಸತ್ಯಾಸತ್ಯೆತೆಯನ್ನು ಆದರಿಸಿ ಸೂಕ್ತ ಕ್ರಮ ಕೈಗೊಳ್ಳುವ ಕುರಿತಾದ ಕೇಂದ್ರದ ನಿಲುವಿನಲ್ಲಿ ಯಾವೊಂದು ಬದಲಾವಣೆಯೂ ಇಲ್ಲ ಎಂದು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಬಂಟರನ್ನಿಟ್ಟುಕೊಂಡು ಭಂಡಾಟ ಬೇಡ ಧೋನಿ-ತಪ್ಪು ತಿದ್ದಿಕೊಳ್ಳದಿದ್ದರೆ ಸೋಲಿನ ಸರಣಿ

ನೇಪಿಯರ್(ಜ.21): ಆಸ್ಟ್ರೇಲಿಯಾ, ವೆಸ್ಟ್`ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಮೂರೂ ಸರಣಿಗಳಲ್ಲಿ ಸುರೇಶ್ ರೈನಾ ಭಾರೀ ವೈಫಲ್ಯ ಅನುಭವಿಸಿದ್ದಾರೆ. ಆದರೂ, ತಂಡದಲ್ಲಿ ಮುಂದುವರೆದಿರುವ ಧೋನಿ.

ದೆಹಲಿಯಲ್ಲಿ ಕೇಜ್ರಿವಾಲ್ ಧರಣಿ:ಪೊಲೀಸರು-ಆಮ್ ಆದ್ಮಿ ಕಾರ್ಯಕರ್ತರ ಘರ್ಷಣೆ

ನವದೆಹಲಿ(ಜ.21): ಸಚಿವರ ಮಾತು ಕೇಳದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಆಗ್ರಹಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಡೆಸುತ್ತಿರುವ ಧರಣಿ 2ನೇ ದಿನ ಮತ್ತಷ್ಟು ತೀವ್ರತೆ ಪಡೆದಿದೆ. 

ಜೆಡಿಎಸ್ ಕಚೇರಿ ಕಾಂಗ್ರೆಸ್`ಗೆ ಸೇರಿದ್ದು - ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್

ಬೆಂಗಳೂರು(ಜ.21): ಜೆಡಿಎಸ್ ಪಕ್ಷಕ್ಕೆ ಯಾಕೋ ಟೈಮ್ ಸರಿಯಿಲ್ಲ ಅಂತಾ ಕಾಣುತ್ತೆ. ಅದಕ್ಕೆ ಒಂದರ ಹಿಂದೆ ಒಂದರಂತೆ ಸಮಸ್ಯೆಗಳು ಎದುರುರಾಗುತ್ತಲೇ ಇವೆ. ಈಗ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಜೆಡಿಎಸ್ ಕಚೇರಿ ಕಾಂಗ್ರೆಸ್ ಪಾಲಾಗಿದೆ.

ವೀರಪ್ಪನ್ ಸಹಚರರು ಸೇರಿ 15 ಜನರ ಮರಣದಂಡನೆ ಶಿಕ್ಷೆ ಜೀವಾವಧಿಯಾಗಿ ಬದಲಾವಣೆ- ಸುಪ್ರೀಂ

ಕ್ಷಮಾದಾನ ಅರ್ಜಿ ವಿಳಂಬವಾದರೆ ಮರಣದಂಡನೆ ಶಿಕ್ಷೆ ಜೀವಾವಧಿ ಶಿಕ್ಷೆಯಾಗಿ ಪರಿವರ್ತನೆ .

ಆಸ್ತಿ ಬಗ್ಗೆ ಸುಳ್ಳು ಅಫಿಡವಿಟ್ ಆರೋಪ-ಸಚಿವ ದೇಶಪಾಂಡೆ ವಿರುದ್ಧ ದೂರು

ಕಾರವಾರ(ಜ.20): ತಮ್ಮ ಆಸ್ತಿ ಬಗ್ಗೆ ಚುನಾವಣಾ ಆಯೋಗಕ್ಕೆ ಸುಳ್ಳು ಅಫಿಡವಿಟ್ ಸಲ್ಲಿಸಿದ ಆರೋಪದಡಿ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ವಿರುದ್ಧ ಕೇಸ್ ದಾಖಲಾಗಿದೆ. ಹಳಿಯಾಳದ ಜೆಎಂಎಫ್`ಸಿ ಕೋರ್ಟ್`ನಲ್ಲಿ ಸಾಮಾಜಿಕ ಕಾರ್ಯಕರ್ತ ಜಯಂತ್ ತಿನೇಕರ್ ಕೇಸ್ ದಾಖಲಿಸಿದ್ದಾರೆ. 

2ನೇ ಪತ್ನಿ ರಾಧಿಕಾ ಬಗ್ಗೆ ಮಾಹಿತಿ ನೀಡದ ಆರೋಪ-ಕುಮಾರಸ್ವಾಮಿ ವಿರುದ್ಧ ದೂರು

ಬೆಂಗಳೂರು(ಜ.20): ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. 

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ: ಜನಾರ್ದನ ರೆಡ್ಡಿ ಸೇರಿ ಹಲವರ ವಿರುದ್ಧ ಚಾರ್ಜ್`ಶೀಟ್

ಬೆಂಗಳೂರು(ಜ.20): ಬೇಲೇಕೇರಿ ಅದಿರು ನಾಪತ್ತೆ ಪ್ರಕಣದ ತನಿಖೆ ಮುಂದುವರೆದಿದೆ. ಇದೀಗ ಬೇಲೇಕೇರಿ ಬಂದರಿನಿಂದ ಅಕ್ರಮವಾಗಿ ವಿದೇಶಗಳಿಗೆ ಅದಿರು ರಪ್ತು ಮಾಡಿದ ಆರೋಪದಡಿ ಎಸ್ ಬಿ ಲಾಜಿಸ್ಟಿಕ್ ವಿರುದ್ದ ಸಿಬಿಐ ಮತ್ತೆರಡು ಪೂರಕ ಚಾರ್ಜ್`ಶೀಟ್ ಗಳನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ. 

ಪ್ರಧಾನಿಗಿರುವ ಎದೆಗಾರಿಕೆಯೂ ಕಾಂಗ್ರೆಸಿಗಿಲ್ಲವೇ; ಸುಶ್ಮಾ ಸ್ವರಾಜ್ ಪ್ರಶ್ನೆ

ಸುಶ್ಮಾ ಸ್ವರಾಜ್

ಸ್ವತಃ ಪ್ರಧಾನಿ ಮನಮೋಹನ್ ಸಿಂಗ್ ಅವರೇ ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶ ಮುನ್ನಡೆದರೆ ಉತ್ತಮ ಎಂದು ವಿಶ್ವಾಸ ವ್ಯಕ್ತಪಡಿಸಿರುವಾಗ ಅವರದೇ ಪಕ್ಷ ಕಾಂಗ್ರೆಸಿಗೆ ಯುವರಾಜ ರಾಹುಲ್ ಗಾಂಧಿಯನ್ನ ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸಲು ಮನಸ್ಸಾಗಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.

ಟೀ ಮಾರುವವನ ವಿರುದ್ಧ ಸ್ಪರ್ಧಿಸಲು ರಾಜವಂಶ ಹಿಂದೇಟು; ಕಾಂಗ್ರೆಸ್ ವಿರುದ್ಧ ಮೋದಿ ಲೇವಡಿ

ನರೇಂದ್ರ ಮೋದಿ

ಈ ಹಿಂದೆ ನರೇಂದ್ರ ಮೋದಿ ಅವರು ಬಡತನ ಎದುರಿಸುತ್ತಿದ್ದ ದಿನಗಳಲ್ಲಿ ಚಹಾ ಮಾರಾಟ ಮಾಡಿ ಬದುಕು ಸವೆಸುತ್ತಿದ್ದ ದಿನಗಳನ್ನು ಉಲ್ಲೇಖಿಸಿ ನೀಚಮಟ್ಟದಲ್ಲಿ ಹಿಯಾಳಿಸಿದ್ದ ಮಣಿಶಂಕರ್ ಅಯ್ಯರ್ ಅವರ ಮಾತಿಗೆ ತಿರುಗೇಟು ನೀಡಿದ್ದಾರೆ.

ಆಮ್ ಆದ್ಮಿ ವಿರುದ್ಧ ಅಧಿಕ ಪ್ರಸಂಗ ಆರೋಪ

ಅರವಿಂದ್ ಕೇಜ್ರಿವಾಲ್, ಎಸಿಪಿ ಬಿ.ಎಸ್.ಜಕಾರ್, ಸೋಮನಾಥ ಭಾರ್ತಿ

ಬಂಧನದ ವೇಳೆ ಮಹಿಳೆಯರನ್ನು ಶೌಚದ ಕೋಣೆಗೂ ತೆರಳಲು ಅವಕಾಶ ನೀಡಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದ್ದು, ಒಬ್ಬರು ಮಹಿಳೆಯನ್ನು ಸಾರ್ವಜನಿಕ ಪ್ರದೇಶದಲ್ಲೇ ಮೂತ್ರ ಮಾಡಲು ಒತ್ತಡ ಹೇರಲಾಯಿತೆಂಬ ಆರೋಪ ಕೇಳಿಬಂದಿದೆ.

ಸಿದ್ದರಾಮಯ್ಯ ಹೆಸರು ದುರ್ಬಳಕೆ ಆರೋಪ

ಸಿದ್ದರಾಮಯ್ಯ

ದಲಿತ ದೌರ್ಜನ್ಯಗಳ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳದೆ ಸತಾಯಿಸುತ್ತಿರುವ ಯಾದಗಿರಿ ಎಸ್ಪಿಯನ್ನು ಸರ್ಕಾರ ಕೂಡಲೆ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ವಿಠ್ಠಲ್ ಅರಬಾವಿ ಆತ್ಮಹತ್ಯೆ ಪ್ರಕರಣ ಫೆ.5ಕ್ಕೆ ಸರ್ಕಾರಕ್ಕೆ ಅಂತಿಮ ವರದಿ

ಒಳಚಿತ್ರದಲ್ಲಿರುವವರು ಮೃತ ರೈತ ವಿಠಲ್ ಅರಬಾವಿ/  ಸಾಂದರ್ಭಿಕ ಚಿತ್ರ_ungu

ರೈತರ ಹೋರಾಟಕ್ಕೆ ತಕ್ಷಣ ಸ್ಪಂಧಿಸಿದ್ದರೆ ಈ ಘಟನೆ ಸಂಭವಿಸುತ್ತಿರಲಿಲ್ಲ ಇದಕ್ಕೆ ಸಿದ್ದರಾಮಯ್ಯ ನೇರ ಹೊಣೆ ಎಂದಿದ್ದಾರೆ ನೊಂದ ರೈತರು...

ಉಗ್ರ ಯಾಸಿನ್ ಭಟ್ಕಳ್`ನನ್ನ ಬೆಂಗಳೂರಿಗೆ ಕರೆತಂದ ಪೊಲೀಸರು

ಬೆಂಗಳೂರು(ಜ.18): ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಸ್ಟೋಟ ಪ್ರಕರಣದ ಪ್ರಮುಖ ಆರೋಪಿ ಯಾಸಿನ್ ಭಟ್ಕಳ್`ನನ್ನ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. 

ಸೋನಿಯಾ ಅಳಿಯನ ಡೀಲ್ ಕೆಣಕಿದ್ದ ಅಶೋಕ್ ಖೇಮ್ಕಾ ವಿರುದ್ಧ ಸಿಬಿಐ ತನಿಖೆ..!

ನವದೆಹಲಿ(ಜ.18): ಖೇಮ್ಕಾ ವಿರುದ್ಧ ಹರ್ಯಾಣದ ಭೂಪಿಂದರ್ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗಾಗಲೇ ಹಲವು ತನಿಖೆಗಳನ್ನ ನಡೆಸುತ್ತಿದೆ. ಇದರ ಬೆನ್ನಲ್ಲೇ ಅಶೋಕ್ ಖೇಮ್ಕಾ ವಿರುದ್ಧ ಸಿಬಿಐ ತನಿಖೆಗೂ ಆದೇಶಿಸಲಾಗಿದೆ.

ಹೆಂಡತಿ ಸಾವಿನಿಂದ ಆಘಾತ - ಎದೆನೋವಿನಿಂದ ಆಸ್ಪತ್ರೆಗೆ ದಾಖಲಾದ ಶಶಿ ತರೂರ್

ನವದೆಹಲಿ(ಜ.18): ಪತ್ನಿ ಸುನಂದಾ ಪುಷ್ಕರ್ ಸಾವಿನಿಂದ ತೀವ್ರ ಆಘಾತಕ್ಕೀಡಾಗಿರುವ ಕೇಂದ್ರ ಸಚಿವ ಶಶಿ ತರೂರ್ ಬೆಳಗಿನ ಜಾವ ಹೃದಯ ಸಂಬಂಧಿ ಸಮಸ್ಯೆಯಿಂದ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಲೋಕಸಭೆಗೆ ಜೆಡಿಎಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಬೆಂಗಳೂರು(ಜ.17): ಲೋಕಸಭಾ ಚುನಾವಣೆ ತಯಾರಿ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಸ್ವಲ್ಪ ಮಂಕಾಗಿದ್ದ ಜೆಡಿಎಸ್ ಈಗ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ.

ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಲಿ ಎಂದು ಕನ್ನಡಿಗರನ್ನ ಕೆಣಕಿದ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್

ಬೆಳಗಾವಿ(ಜ.17): ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಮತ್ತೊಮ್ಮೆ ಪ್ರಚೋದನಾಕಾರಿ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.